ಸವಣೂರು ಬಿಲ್ಲವ ಗ್ರಾಮ ಸಮಿತಿ ಮಹಾಸಭೆ , ಪುಸ್ತಕ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮ
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ (ರಿ) ಪುತ್ತೂರು ಇದರ ಆಶ್ರಯದಲ್ಲಿ ಬಿಲ್ಲವ ಗ್ರಾಮ ಸಮಿತಿ ಸವಣೂರು ಹಾಗೂ ಬಿಲ್ಲವ ಮಹಿಳಾ ವೇದಿಕೆ ಸವಣೂರು ಇದರ ವಾರ್ಷಿಕ ಮಹಾಸಭೆ ಹಾಗೂ ಉಚಿತ ಪುಸ್ತಕ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮ ಸವಣೂರು ಯುವ ಸಭಾ ಭವನದಲ್ಲಿ ನಡೆಯಿತು. ಈ ಸಭೆಯನ್ನು ಪುತ್ತೂರು ತಾಲೂಕು ಬಿಲ್ಲವ ಸಂಘ ಇದರ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಕೆಡೆಂಜಿ ಉದ್ಘಾಟನೆ ಮಾಡಿ ಮಾತನಾಡಿದರು.

ಅತಿಥಿಗಳಾದ ಶ್ರೀ ಶೀನಪ್ಪ ಪೂಜಾರಿ ದೇವಸ್ಯ ಸಹಾಯಕ ಪೊಲೀಸ್ ಉಪನಿರೀಕ್ಷಕರು CCB ಮಂಗಳೂರು ಪುತ್ತೂರು ತಾಲೂಕು ಬಿಲ್ಲವ ಸಂಘ ಉಪಾಧ್ಯಕ್ಷರಾದ ಶ್ರೀ ಚಿದಾನಂದ ಸುವರ್ಣ, ಕೋಶಾಧಿಕಾರಿ ಶ್ರೀ ಜನಾರ್ದನ ಪದಡ್ಕ, ಮಹಿಳಾ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಪುಷ್ಪಾವತಿ ಆನಂದ ಕೇಕುಡೆ, ವಲಯ ಸಂಚಾಲಕರಾದ ಶ್ರೀ ಸಂತೋಷ್ ಮರಕ್ಕಡ ಉಪಸ್ಥಿತರಿದ್ದರು.ಸವಣೂರು ಗ್ರಾಮ ಸಮಿತಿ ಅಧ್ಯಕ್ಷರಾದ ಅಕ್ಷಯ್.ಎ. ಅತಿಥಿಗಳನ್ನು ಸ್ವಾಗತಿಸಿದರು.

ಕಾರ್ಯದರ್ಶಿ ಚೇತನ್ ಕುಮಾರ್ ಕೋಡಿಬೈಲು ವಂದಿಸಿದರು. ರಕ್ಷಾ ಸುಣ್ಣಾಜೆ ಇವರು ಕಾರ್ಯಕ್ರಮ ನಿರೂಪಿಸಿದರು 85% ಮೇಲ್ಪಟ್ಟು ಅಂಕಗಳಿಸಿದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ, ಹಾಗು ಪದವಿ ಆದವರಿಗೆ ಅಭಿನಂದನೆ ಸಲ್ಲಿಸಲಾಯಿತು,
ಹಾಗೂ 23 ವರ್ಷದಿಂದ ಸವಣೂರು ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿದ್ದ ಬಾಲಕೃಷ್ಣ ಪೂಜಾರಿ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.ಮತ್ತು 32 ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲಾಯಿತು. ಗ್ರಾಮ ಸಮಿತಿ ಸದಸ್ಯರು ಭಾಗವಹಿಸಿದ್ದರು.