Home Uncategorizedಬೈಕಂಪಾಡಿ–KIOCL ಜಂಕ್ಷನ್ ಎಲಿವೇಟೆಡ್ ಫ್ಲೈಓವರ್ ಯೋಜನೆಗೆ ಕೇಂದ್ರ ಅನುಮೋದನೆ: ₹414.16 ಕೋಟಿ ಯೋಜನೆಗೆ ಟೆಂಡರ್ ಪ್ರಕ್ರಿಯೆ ಆರಂಭ

ಬೈಕಂಪಾಡಿ–KIOCL ಜಂಕ್ಷನ್ ಎಲಿವೇಟೆಡ್ ಫ್ಲೈಓವರ್ ಯೋಜನೆಗೆ ಕೇಂದ್ರ ಅನುಮೋದನೆ: ₹414.16 ಕೋಟಿ ಯೋಜನೆಗೆ ಟೆಂಡರ್ ಪ್ರಕ್ರಿಯೆ ಆರಂಭ

Central Approval for Bykampadi–KIOCL Flyover Project: ₹414.16 Crore Tender Process Begins

by anamika

ಬೈಕಂಪಾಡಿ–KIOCL ಜಂಕ್ಷನ್ ಎಲಿವೇಟೆಡ್ ಫ್ಲೈಓವರ್ ಯೋಜನೆಗೆ ಕೇಂದ್ರ ಅನುಮೋದನೆ: ₹414.16 ಕೋಟಿ ಯೋಜನೆಗೆ ಟೆಂಡರ್ ಪ್ರಕ್ರಿಯೆ ಆರಂಭ

ಮಂಗಳೂರು: ರಾ.ಹೆ.66ರಲ್ಲಿ ಬೈಕಂಪಾಡಿಯಿಂದ KIOCL ಜಂಕ್ಷನ್ ವರೆಗೆ ₹414.16 ಕೋಟಿ ವೆಚ್ಚದಲ್ಲಿ ಎಲಿವೇಟೆಡ್ ಫ್ಲೈಓವರ್ ಹಾಗೂ ಸರ್ವಿಸ್ ರಸ್ತೆ ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ನವ ಮಂಗಳೂರು ಬಂದರಿಗೆ ನೇರ ಸಂಪರ್ಕ ಕಲ್ಪಿಸುವ 3.075 ಕಿ.ಮೀ. ಉದ್ದದ ಈ ಅಭಿವೃದ್ಧಿ ಯೋಜನೆಯಲ್ಲಿ 1.520 ಕಿ.ಮೀ. ಉದ್ದದ 6 ಪಥದ ಅತ್ಯಾಧುನಿಕ ಎಲಿವೇಟೆಡ್ ಫ್ಲೈಓವರ್ ನಿರ್ಮಾಣವಾಗಲಿದೆ. ಜೊತೆಗೆ ಹೆದ್ದಾರಿಯ ಇಕ್ಕೆಲಗಳಲ್ಲಿ ಒಟ್ಟು 5.825 ಕಿ.ಮೀ. ಉದ್ದದ ಸರ್ವಿಸ್ ರಸ್ತೆ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ.

ಇಪಿಸಿ ಮಾದರಿಯಲ್ಲಿ ಅನುಷ್ಠಾನಗೊಳ್ಳಲಿರುವ ಈ ಯೋಜನೆಗೆ ನವ ಮಂಗಳೂರು ಬಂದರು ಪ್ರಾಧಿಕಾರವು ಅಗತ್ಯ ಭೂಮಿ ಹಾಗೂ ಆರ್ಥಿಕ ಸಹಾಯವನ್ನು ಒದಗಿಸಲಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಬಂದರಿಗೆ ಸರಕು ಸಾಗಣೆ ಸುಗಮವಾಗುವುದರ ಜೊತೆಗೆ ಸ್ಥಳೀಯ ಮತ್ತು ಹೆದ್ದಾರಿ ವಾಹನಗಳ ಸಂಚಾರವನ್ನು ಪ್ರತ್ಯೇಕಿಸಿ ರಸ್ತೆ ಸುರಕ್ಷತೆ ಹೆಚ್ಚಲಿದೆ ಎಂದು ಸಂಸದರು ತಿಳಿಸಿದ್ದಾರೆ.

You may also like

Leave a Comment