Home Uncategorizedಪಿಎನ್‌ಜಿ ಗ್ರಾಹಕರಿಗೆ ಶಾಕ್: ಎಲ್‌ಪಿಜಿ ಸಿಲಿಂಡರ್ ವಿತರಣೆ ಸಂಪೂರ್ಣ ಸ್ಥಗಿತ!

ಪಿಎನ್‌ಜಿ ಗ್ರಾಹಕರಿಗೆ ಶಾಕ್: ಎಲ್‌ಪಿಜಿ ಸಿಲಿಂಡರ್ ವಿತರಣೆ ಸಂಪೂರ್ಣ ಸ್ಥಗಿತ!

by anamika

ಪಿಎನ್‌ಜಿ ಗ್ರಾಹಕರಿಗೆ ಶಾಕ್: ಎಲ್‌ಪಿಜಿ ಸಿಲಿಂಡರ್ ವಿತರಣೆ ಸಂಪೂರ್ಣ ಸ್ಥಗಿತ!

ದೇಶದಲ್ಲಿ ಗ್ಯಾಸ್ ಕೊರತೆ ಹಿನ್ನೆಲೆ ಕೇಂದ್ರದ ಕಠಿಣ ನಿರ್ಧಾರ

ದೇಶದಲ್ಲಿ ಎಲ್‌ಪಿಜಿ ಗ್ಯಾಸ್ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಸ್ಟ್ರೇಟ್ ಆಫ್ ಹಾರ್ಮುಜ್ ಸಮುದ್ರ ಮಾರ್ಗದ ಸಮಸ್ಯೆಯಿಂದ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ, ಪೈಪ್‌ಲೈನ್ ನೈಸರ್ಗಿಕ ಅನಿಲ (PNG) ಸಂಪರ್ಕ ಹೊಂದಿರುವ ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್ ವಿತರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.


ಸೋಮವಾರ ಹೊರಡಿಸಿದ ಹೊಸ ಆದೇಶದಂತೆ, ಈಗಾಗಲೇ ಮನೆಗಳಿಗೆ ಪಿಎನ್‌ಜಿ ಸಂಪರ್ಕ ಹೊಂದಿರುವ ಗ್ರಾಹಕರು ಇನ್ಮುಂದೆ ಎಲ್‌ಪಿಜಿ ಸಿಲಿಂಡರ್ ಪಡೆಯಲು ಅರ್ಹರಾಗಿರುವುದಿಲ್ಲ. ದೇಶದಲ್ಲಿನ ಇಂಧನ ಕೊರತೆಯನ್ನು ಸಮರ್ಪಕವಾಗಿ ನಿರ್ವಹಿಸುವ ಉದ್ದೇಶದಿಂದ ಈ ಕ್ರಮ ಜಾರಿಗೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಹೊಸ ನಿಯಮದ ಪ್ರಕಾರ, ಒಂದೇ ಮನೆ ಅಥವಾ ಒಬ್ಬ ವ್ಯಕ್ತಿ ಪಿಎನ್‌ಜಿ ಹಾಗೂ ಎಲ್‌ಪಿಜಿ ಎರಡೂ ಸಂಪರ್ಕಗಳನ್ನು ಒಂದೇ ವೇಳೆ ಹೊಂದಲು ಅವಕಾಶ ಇರುವುದಿಲ್ಲ. ಸರ್ಕಾರದ ಈ ನಿರ್ಧಾರ ಕೋಟ್ಯಂತರ ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

You may also like

Leave a Comment