Home Uncategorizedಗೆಳೆಯರ ಬಳಗ ಕೊಡಿಮಾರು ಅಬೀರ ವತಿಯಿಂದ “ಕೊಡಿಮಾರು ಪ್ರೀಮಿಯರ್ ಲೀಗ್ -2026” ಕ್ರಿಕೆಟ್ ಪಂದ್ಯಾಟ

ಗೆಳೆಯರ ಬಳಗ ಕೊಡಿಮಾರು ಅಬೀರ ವತಿಯಿಂದ “ಕೊಡಿಮಾರು ಪ್ರೀಮಿಯರ್ ಲೀಗ್ -2026” ಕ್ರಿಕೆಟ್ ಪಂದ್ಯಾಟ

by Editor

ಕ್ರಿಕೆಟ್ ಆಗಿರಲಿ ಅಥವಾ ಯಾವುದೇ ಕ್ರೀಡೆ ಆಗಿರಲಿ ಅದು ಒಬ್ಬ ವ್ಯಕ್ತಿಯ ಮಾನಸಿಕ ದೈಹಿಕ ಆರೋಗ್ಯಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುತ್ತದೆ.ಅದರ ಜತೆಗೆ ಎಲ್ಲರನ್ನೂ ಸಂಘಟಿಸುವ ಮೂಲಕ ಸಮಾಜದಲ್ಲಿ ಪ್ರತಿಯೊಬ್ಬರ ನಡುವೆ ಉತ್ತಮ ಬಾಂಧವ್ಯ ವೃದ್ಧಿಯಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಾಯವಾಗುತ್ತದೆ ಎಂದು ಗೆಳೆಯರ ಬಳಗದ ಸ್ಥಾಪಕ ಅಧ್ಯಕ್ಷರಾದ ವಸಂತ ರೈ ಕಾರ್ಕಳ ಹೇಳಿದರು.ಅವರು ಗೆಳೆಯರ ಬಳಗ (ರಿ) ಕೊಡಿಮಾರು ಅಬೀರ ಇದರ ವತಿಯಿಂದ ಸುಭಾಶ್ ಚಂದ್ರ ಬೋಸ್ ಕ್ರೀಡಾಂಗಣ ಏಲಡ್ಕದಲ್ಲಿ ನಡೆದ ಕೊಡಿಮಾರು ಪ್ರೀಮಿಯರ್ ಲೀಗ್ 2026 ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷರಾದ ಬಾಲಚಂದ್ರ ಅಬೀರ ವಹಿಸಿದ್ದರು. ವೇದಿಕೆಯಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ, ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಕಾಣಿಯೂರು ಇದರ ಕಾರ್ಯದರ್ಶಿ ರಕ್ಷಿತ್ ಮುಗರಂಜ,ಗೆಳಯರ ಬಳಗದ ಉಪಾಧ್ಯಕ್ಷರಾದ ಸುಂದರ ಕಂಡೂರು,ಕಾರ್ಯದರ್ಶಿ ಶ್ರೀನಿತ್ ಮಿಪಾಲು ಉಪಸ್ಥಿತರಿದ್ದರು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ಕೂಟದ ಉದ್ಘಾಟನೆಯನ್ನು ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಶ್ವನಾಥ ಕೊಪ್ಪ ಅವರು ನೆರವೇರಿಸಿದರು. ಉದ್ಘಾಟನ ಸಮಾರಂಭದ ವೇದಿಕೆಯಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಬಾಲಚಂದ್ರ ಅಬೀರ,ಸ್ಥಾಪಕ ಕಾರ್ಯದರ್ಶಿ ಶೇಖರ ಅಬೀರ ,ಅರವಿಂದ ಕಂಡೂರು, ಗೌರವ ಸಲಹೆಗಾರ ಪ್ರಮೋದ್ ನೀರಜರಿ,ಕಾರ್ಯದರ್ಶಿ ಶ್ರೀನಿತ್ ಮಿಪಾಲು, ಮೋಹಿತ್ ಕಾಯೆರ್ತಡಿ ಉಪಸ್ಥಿತರಿದ್ದರು.ಪ್ರದೀಪ್ ಎಣ್ಮೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದು ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆದು ಧನುಷ್ ಕಾಣಿಯೂರು, ನಿತಿನ್ ಮುಗರಂಜ ಮತ್ತು ರಕ್ಷಿತ್ ಮುಗರಂಜ ಮಾಲಕತ್ವದ ಸೂಪ ಸ್ಟೈಕರ್ಸ್ ತಂಡ ಪ್ರಥಮ ಸ್ಥಾನ, ದಿವಾಕರ ಕೋಳಿಗದ್ದೆ, ಪ್ರಮೋದ್ ನೀರಜರಿ ಮಾಲಕತ್ವದ ಡಿ.ಪಿ ವಾರಿಯರ್ಸ್ ತಂಡ ದ್ವಿತೀಯ ಸ್ಥಾನ, ಮನೋಜ್ ಬರೆಮೇಲು ಮಾಲಕತ್ವದ ಸದಾಶಿವ ವಾರಿಯರ್ಸ್ ತಂಡ ತೃತೀಯ ಸ್ಥಾನ ಪಡೆದು ಕೊಂಡಿತ್ತು.

You may also like

Leave a Comment