ಸಜಂಕು: ‘ಮಂದಾರ’ ಮನೆಯಲ್ಲಿ ಗೃಹಪ್ರವೇಶ – ಭಾರತ ಮಾತಾ ಪೂಜನದೊಂದಿಗೆ ಕಾರ್ಯಕ್ರಮ
ಸಜಂಕು, ಕಾಯ್ಮಣ ಗ್ರಾಮ: ಸಜಂಕು ನಿವಾಸಿ ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಸುಂದರ ಗೌಡ ಹಾಗೂ ಅವರ ಪುತ್ರ, ಪ್ರಗತಿಪರ ಕೃಷಿಕ ಶ್ರೀ ದೇವಿಪ್ರಸಾದ್ ಗೌಡ ಅವರು ಹೊಸದಾಗಿ ನಿರ್ಮಿಸಿದ ‘ಮಂದಾರ’ ಮನೆಯಲ್ಲಿ ಗೃಹಪ್ರವೇಶವನ್ನು ಭಾರತ ಮಾತಾ ಪೂಜನ ಕಾರ್ಯಕ್ರಮದೊಂದಿಗೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ನಾ. ಸೀತಾರಾಮ ಅವರು ಮಾತನಾಡಿ, ಹಿಂದೂ ಸಮಾಜವು ಜಾತಿ-ಮತ ಭೇದಗಳನ್ನು ತೊರೆದು ಏಕತೆಯಿಂದ ಬದುಕುವುದು ಅತ್ಯಾವಶ್ಯಕ ಎಂದು ಹೇಳಿದರು. ಇದೇ ಹಿಂದೂ ಸಮಾಜದ ಶಕ್ತಿ ಎಂದು ಅವರು ಅಭಿಪ್ರಾಯಪಟ್ಟರು. ಜೊತೆಗೆ ಭಾರತ ಮಾತಾ ಪೂಜನದ ಹಿನ್ನೆಲೆ ಮತ್ತು ಉದ್ದೇಶಗಳನ್ನೂ ವಿವರಿಸಿದರು.

ಶ್ರೀ ಸುಂದರ ಗೌಡ ಅವರು ದೀಪ ಪ್ರಜ್ವಲನೆ ಮಾಡಿದರು. ಶ್ರೀ ದೇವಿಪ್ರಸಾದ್ ಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಶಿವಪ್ರಸಾದ್ ಗೌಡ ಅವರು ಧನ್ಯವಾದಗಳನ್ನು ಸಮರ್ಪಿಸಿದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಶ್ರೀ ದಾಮೋದರ ಗೌಡ (ಬೊಮ್ಮೋಡಿ), ಶ್ರೀ ನಾರಾಯಣ ಮಡಿವಾಳ, ಶ್ರೀ ಡೊಂಬಯ್ಯ ನಲಿಕೆ (ಕಾಪೆಜಾಲು), ಶ್ರೀ ಜಿನ್ನಪ್ಪ ಪರವ (ಮರಕ್ಕಡ), ಶ್ರೀ ಐತ ಮುಗೇರ (ಮರಕ್ಕಡ), ಶ್ರೀ ದೂಮಣ್ಣ ಕುಂಬಾರ (ಕೊಪ್ಪ) ಅವರನ್ನು ಗೌರವಿಸಲಾಯಿತು.

ಭಾರತ ಮಾತಾ ಪೂಜನದ ನಂತರ ‘ಮಂದಾರ’ ಪ್ರತಿಷ್ಠಾನದ ಅಂಗವಾಗಿ ಸಾಧಕರಾದ ಶ್ರೀ ಹರೀಶ್ ಗೌಡ (ಕಾಮಂಜೆ), ಶ್ರೀ ಕೃಷ್ಣಪ್ಪ ಕುಂಬಾರ (ಕೊಪ್ಪ) ಹಾಗೂ ಶ್ರೀ ಕೊರಗಪ್ಪ ಕುಂಬಾರ (ಕೊಪ್ಪ) ಅವರನ್ನು ಸನ್ಮಾನಿಸಲಾಯಿತು.