ದೇಶಾದ್ಯಂತ ಮತ್ತೆ ಇಳಿದ ಚಿನ್ನದ ದರ ಚಿನ್ನದ ಬೆಲೆಯಲ್ಲಿ ಇಳಿಕೆ ಮುಂದುವರಿಕೆ; ಇಂದಿನ ತಾಜಾ ದರ ಪ್ರಕಟ
: ಚಿನ್ನದ ದರದಲ್ಲಿ ಇಂದೂ ಇಳಿಕೆ ಕಂಡುಬಂದಿದ್ದು, ಖರೀದಿದಾರರಿಗೆ ಸ್ವಲ್ಪ ನಿರಾಳತೆ ತಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ದರದಲ್ಲಿ ಪ್ರತಿ ಗ್ರಾಂಗೆ ₹75 ಇಳಿಕೆಯಾಗಿದ್ದು, ₹13,735ಕ್ಕೆ ತಲುಪಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹82 ಇಳಿಕೆಯಾಗಿದ್ದು, ₹14,984ಕ್ಕೆ ಇಳಿದಿದೆ.
22 ಕ್ಯಾರಟ್ ಚಿನ್ನದ ಬೆಲೆ ಪ್ರಕಾರ, 8 ಗ್ರಾಂಗೆ ₹1,09,880 ಹಾಗೂ 10 ಗ್ರಾಂಗೆ ₹1,37,350 ಆಗಿದೆ. 100 ಗ್ರಾಂ ಚಿನ್ನಕ್ಕೆ ₹13,73,500 ಪಾವತಿಸಬೇಕಾಗಿದೆ. ಇನ್ನು 24 ಕ್ಯಾರಟ್ ಚಿನ್ನದ ದರದಲ್ಲಿ 8 ಗ್ರಾಂಗೆ ₹1,19,872, 10 ಗ್ರಾಂಗೆ ₹1,49,840 ಹಾಗೂ 100 ಗ್ರಾಂಗೆ ₹14,98,400 ಇದೆ.
ದೇಶದ ಪ್ರಮುಖ ನಗರಗಳಲ್ಲಿ ದರ ಒಂದೇ ಮಟ್ಟದಲ್ಲಿ
ಚೆನ್ನೈ, ಮುಂಬೈ, ದೆಹಲಿ, ಕೋಲ್ಕತ್ತಾ ಹಾಗೂ ಹೈದರಾಬಾದ್ ನಗರಗಳಲ್ಲಿ ಸಹ ಚಿನ್ನದ ದರ ಸಮಾನವಾಗಿದ್ದು, 22 ಕ್ಯಾರಟ್ ಚಿನ್ನ ಪ್ರತಿ ಗ್ರಾಂ ₹13,735 ಮತ್ತು 24 ಕ್ಯಾರಟ್ ಚಿನ್ನ ₹14,984ಕ್ಕೆ ಲಭ್ಯವಿದೆ.
ಬೆಳ್ಳಿ ದರ ಸ್ಥಿರ
ಇತ್ತ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಾಣದಿದ್ದು, ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ₹250, 10 ಗ್ರಾಂ ₹2,500 ಹಾಗೂ 1 ಕೆಜಿ ಬೆಳ್ಳಿ ₹2,50,000 ದಲ್ಲಿ ಸ್ಥಿರವಾಗಿದೆ.
ಚಿನ್ನದ ದರದಲ್ಲಿ ಸತತ ಇಳಿಕೆ ಕಂಡುಬರುತ್ತಿರುವ ಹಿನ್ನೆಲೆ, ಹೂಡಿಕೆದಾರರು ಹಾಗೂ ಆಭರಣ ಖರೀದಿದಾರರು ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಯನ್ನು ಕಣ್ಣಿಟ್ಟು ನೋಡುವಂತಾಗಿದೆ.