ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಅಚ್ಚರಿ ಬೆಳವಣಿಗೆ; ಆವಕ ಇಳಿಕೆ, ಬೇಡಿಕೆ ಸ್ಥಿರ
ಹಾವೇರಿ: ಪ್ರಸಿದ್ಧ ಮಾರುಕಟ್ಟೆಯಲ್ಲಿ ಈ ವಾರ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಆವಕದಲ್ಲಿ ಗಣನೀಯ ಇಳಿಕೆ ಕಂಡರೂ, ದರದಲ್ಲಿ ಸ್ಥಿರತೆ ಮುಂದುವರಿದಿದ್ದು, ಗುಣಮಟ್ಟದ ಮೆಣಸಿನಕಾಯಿಗೆ ಬೇಡಿಕೆ ಇನ್ನೂ ಕಡಿಮೆಯಾಗಿಲ್ಲ.
ಸೋಮವಾರ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಒಟ್ಟು 89,141 ಚೀಲಗಳು ಆವಕವಾಗಿದ್ದು, ಕಳೆದ ವಾರದ 1 ಲಕ್ಷಕ್ಕೂ ಅಧಿಕ ಚೀಲಗಳೊಂದಿಗೆ ಹೋಲಿಸಿದರೆ ಸ್ಪಷ್ಟ ಇಳಿಕೆ ದಾಖಲಾಗಿದೆ. ಏಪ್ರಿಲ್ ಮೊದಲ ವಾರದಿಂದಲೇ ಆವಕ ಇಳಿಮುಖವಾಗುತ್ತಿದ್ದು, ಸೀಜನ್ ಮುಕ್ತಾಯದ ಸೂಚನೆಗಳು ಕಾಣಿಸುತ್ತಿವೆ.
ಇದ್ರಲ್ಲೂ, ದರಗಳಲ್ಲಿ ಯಾವುದೇ ದೊಡ್ಡ ಏರಿಳಿತ ಕಂಡುಬಾರದಿರುವುದು ವಿಶೇಷ. ಮೂರು ತಳಿಯ ಮೆಣಸಿನಕಾಯಿಗಳಲ್ಲೂ ದರ ಸ್ಥಿರವಾಗಿದ್ದು, ಮಾರುಕಟ್ಟೆಯಲ್ಲಿ ಗುಣಮಟ್ಟದ ಉತ್ಪನ್ನಗಳಿಗೆ ನಿರಂತರ ಬೇಡಿಕೆ ಇದೆ ಎನ್ನುವುದು ಸ್ಪಷ್ಟವಾಗಿದೆ.
ಸೋಮವಾರದ ಮಾರುಕಟ್ಟೆ ದರಗಳು:
- ಕಡ್ಡಿ ತಳಿ: ಕನಿಷ್ಠ ₹3,929, ಗರಿಷ್ಠ ₹58,223, ಸರಾಸರಿ ₹46,509
- ಡಬ್ಬಿ ತಳಿ: ಕನಿಷ್ಠ ₹5,009, ಗರಿಷ್ಠ ₹64,449, ಸರಾಸರಿ ₹48,509
- ಗುಂಟೂರು ತಳಿ: ಕನಿಷ್ಠ ₹1,300, ಗರಿಷ್ಠ ₹17,589, ಸರಾಸರಿ ₹12,689
ಆವಕ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ದರಗಳಲ್ಲಿ ಏರಿಳಿತ ಸಂಭವಿಸುವ ಸಾಧ್ಯತೆ ಇದ್ದು, ರೈತರು ಮತ್ತು ವ್ಯಾಪಾರಿಗಳು ಮಾರುಕಟ್ಟೆಯ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ.