Home Uncategorizedರಾಜ್ಯದಲ್ಲಿ ‘SIR’ ಜೋರಾಗಿ ಆರಂಭ; 5.55 ಕೋಟಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಭಾರಿ ಸಿದ್ಧತೆ

ರಾಜ್ಯದಲ್ಲಿ ‘SIR’ ಜೋರಾಗಿ ಆರಂಭ; 5.55 ಕೋಟಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಭಾರಿ ಸಿದ್ಧತೆ

by anamika

ರಾಜ್ಯದಲ್ಲಿ ‘SIR’ ಜೋರಾಗಿ ಆರಂಭ; 5.55 ಕೋಟಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಭಾರಿ ಸಿದ್ಧತೆ

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಚುನಾವಣಾ ಆಯೋಗ ಭಾರಿ ಸಿದ್ಧತೆ ನಡೆಸಿದ್ದು, ರಾಜ್ಯದ 5.55 ಕೋಟಿ ಮತದಾರರ ವಿವರ ಪರಿಶೀಲನೆ ಕಾರ್ಯ ಆರಂಭವಾಗಿದೆ. ಈ ಪ್ರಕ್ರಿಯೆ 16 ರಾಜ್ಯಗಳೊಂದಿಗೆ ಕರ್ನಾಟಕದಲ್ಲೂ ಜೂನ್ 20ರಿಂದ ಅಧಿಕೃತವಾಗಿ ಆರಂಭವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ರಾಜ್ಯಾದ್ಯಂತ ಸುಮಾರು 59,050 ಬೂತ್ ಮಟ್ಟದ ಅಧಿಕಾರಿಗಳನ್ನು (BLO) ನಿಯೋಜಿಸಲಾಗಿದ್ದು, ಈಗಾಗಲೇ 25 ಸಾವಿರಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ಏಜೆಂಟ್‌ಗಳನ್ನೂ ನೇಮಕ ಮಾಡಲಾಗಿದೆ. ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಈಗಾಗಲೇ 86%ಕ್ಕೂ ಹೆಚ್ಚು ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 30ರಿಂದ ಜುಲೈ 29ರವರೆಗೆ ಮನೆಮನೆಗೆ ಭೇಟಿ ನೀಡಿ ಎಣಿಕೆ ಫಾರ್ಮ್ ವಿತರಣೆ ನಡೆಯಲಿದ್ದು, ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ ಸಲ್ಲಿಸಬೇಕಾಗಿದೆ. ನಕಲಿ, ಮರು ನೋಂದಣಿ, ಸ್ಥಳಾಂತರ ಅಥವಾ ಮೃತರ ಹೆಸರುಗಳನ್ನು ಪತ್ತೆಹಚ್ಚಿ ಪಟ್ಟಿಯನ್ನು ಶುದ್ಧೀಕರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ದೇಶದಾದ್ಯಂತ 36 ಕೋಟಿಗೂ ಅಧಿಕ ಮತದಾರರನ್ನು ಒಳಗೊಂಡು ಈ ಪರಿಷ್ಕರಣೆ ನಡೆಯುತ್ತಿದೆ. ಕರ್ನಾಟಕದಲ್ಲಿ ಈ ಕಾರ್ಯವು 2026ರ ಚುನಾವಣಾ ಸಿದ್ಧತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿ ಪರಿಗಣಿಸಲಾಗಿದೆ.

You may also like

Leave a Comment