91
ಸುಪ್ರೀಂ ಕೋರ್ಟ್ನಿಂದ ಶಿಕ್ಷಕರಿಗೆ TET ಕಡ್ಡಾಯ: 2027ರೊಳಗೆ ಉತ್ತೀರ್ಣವಾಗದಿದ್ದರೆ ಸೇವೆ ರದ್ದು ಸಾಧ್ಯ
ನವದೆಹಲಿ: ಶಿಕ್ಷಕರ ನೇಮಕಾತಿ ಹಾಗೂ ಪದೋನ್ನತಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 2009ರ ಆರ್ಟಿಇ ಕಾಯ್ದೆ ಜಾರಿಗಿಂತ ಮೊದಲು ನೇಮಕಗೊಂಡು ಇನ್ನೂ ಐದು ವರ್ಷಕ್ಕಿಂತ ಹೆಚ್ಚು ಸೇವಾವಧಿ ಉಳಿದಿರುವ ಶಿಕ್ಷಕರು 2027ರ ಸೆಪ್ಟೆಂಬರ್ 1ರೊಳಗೆ TET ಉತ್ತೀರ್ಣರಾಗಬೇಕೆಂದು ನ್ಯಾಯಾಲಯ ಸೂಚಿಸಿದೆ.

ನಿಗದಿತ ಅವಧಿಯಲ್ಲಿ TET ಪಾಸ್ ಮಾಡದ ಶಿಕ್ಷಕರ ಸೇವೆ ರದ್ದುಪಡಿಸುವ ಸಾಧ್ಯತೆ ಇರುವುದಾಗಿ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ನಿವೃತ್ತಿಗೆ ಐದು ವರ್ಷಕ್ಕಿಂತ ಕಡಿಮೆ ಅವಧಿ ಇರುವ ಶಿಕ್ಷಕರಿಗೆ ವಿನಾಯಿತಿ ನೀಡಲಾಗಿದ್ದು, ಅವರಿಗೆ ಪದೋನ್ನತಿಗೆ ಮಾತ್ರ TET ಅಗತ್ಯವಾಗಲಿದೆ.

ಈ ತೀರ್ಪು ದೇಶದಾದ್ಯಂತ ಲಕ್ಷಾಂತರ ಶಿಕ್ಷಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಲವಾರು ರಾಜ್ಯಗಳು ಈಗಾಗಲೇ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಮುಂದಾಗಿವೆ.